ಇಂದಿನ ಯುವ ಜನಾಂಗದಲ್ಲಿ ಸೌಂದರ್ಯದ ಪ್ರಜ್ಞೆ ಹೆಚ್ಚಾಗುತ್ತಿದ್ದು, ಅತಿ ವೇಗವಾಗಿ ಶರೀರದ ತೂಕ ಇಳಿಸಿಕೊಳ್ಳಬೇಕು ಎನ್ನುವ ಹಂಬಲಕ್ಕೆ ಬಿದ್ದು ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ತಮಿಳುನಾಡಿನ ಮಧುರೈನಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಕಲೈಯರಸಿ ಎಂಬ ಯುವತಿ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ತೂಕ ಇಳಿಸುವ ಮದ್ದು ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಕಲೈಯರಸಿ ಯೂಟ್ಯೂಬ್ನಲ್ಲಿ ‘ವೆಂಗಾರಂ’ ಅಥವಾ ಬೊರಾಕ್ಸ್ ಎಂಬ ಪುಡಿಯನ್ನು ಬಳಸುವುದರಿಂದ ಬೇಗನೆ ತೂಕ ಇಳಿಸಬಹುದು ಎಂಬ ಮಾಹಿತಿಯನ್ನು ನಂಬಿ, ಮದ್ದಿನ ಅಂಗಡಿಯಿಂದ ಅದನ್ನು ಖರೀದಿಸಿ ಸೇವಿಸಿದ್ದರು. […]











