ಇವತ್ತು ಗುರುವಾರ. ನನಗೆ ಅಲ್ಲಿಗೆ ಹೋಗಬೇಕಮ್ಮಾ… ಮಗಳು ಶಾಲೆಯಿಂದ ಬೇಗ ಬಂದರೆ… ಎಂದಿನಂತೇ ಏನಾದರೂ ಕಾರಣ ಹೇಳಿ ಬಿಡು ಅಮ್ಮಾ. ಅವಳಿಗಿಷ್ಟದ ತಿಂಡಿ ಮಾಡಿದ್ದೇನೆ… ಸಾಯಿರಾ ಸಿಂಗರಿಸಿಕೊAಡು ಬುರ್ಖಾ ಧರಿಸಿ ಹೊರಟಾಗ ತಾಯಿ ಫಾತೀಮಾ ಟಿಫಿನ್ ಬಾಕ್ಸ್ನ್ನು ಮಗಳ ಕೈಗೆ ಕೊಡುತ್ತಾ ಇದರಲ್ಲಿ ಶೇವಿಗೆ ಪಾಯಸ ಇದೆ, ಆತನಿಗೆ ತುಂಬಾ ಇಷ್ಟ ತಾನೆ… ಕೊಡು.. ಎಂದರು ನಗುತ್ತಾ, ಅಂಗಳದಲ್ಲಿಟ್ಟ ಸ್ಕೂಟರ್ ಹತ್ತಿ ಆಕೆ ಕೈಯಾಡಿಸಿದಳು. ಶಾಂತ ಲಾಡ್ಜ್’ನೊಳಗೆ ಸಾಯಿರಾ ಬಂದಾಗ ವಾಚ್ಮ್ಯಾನ್ ಪರಿಚಯದ ನಗೆ ಬೀರಿ ಸಲಾಮ್ […]







