ಪತಿ-ಪತ್ನಿಯರ ಸಂಬಂಧ ಕೇವಲ ಶಾರೀರಿಕ ಸುಖಕ್ಕೆ ಮಾತ್ರ ಮೀಸಲು ಎಂಬ ನಂಬಿಕೆ ಕೆಲವರಿಗೆ, ವಂಶ ಬೆಳೆಸುವುದೇ ಮದುವೆಯ ಉದ್ದೇಶ ಎಂದು ಭಾವಿಸುವವರೂ ಇದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ಪತಿ-ಪತ್ನಿಯು ಪರಸ್ಪರರ ಹಿತಚಿಂತಕರಾಗಿರುತ್ತಾರೆ. ಆದ್ದರಿಂದಲೇ ಕುರ್ಆನ್ನಲ್ಲಿ ಪತಿ-ಪತ್ನಿಯನ್ನು ಪರಸ್ಪರರ ಉಡುಪು ಎನ್ನಲಾಗಿದೆ. ಅವರನ್ನು ಜೋಡಿ’ ಎನ್ನಲಾಗಿದೆ.ಉಡುಪು’ ಯಾವ ರೀತಿ ಒಂದು ಶರೀರದ ನಗ್ನತೆಯನ್ನು ಮರೆಮಾಡುವ ಮೂಲಕ ಗೌರವಕ್ಕೆ ಪಾತ್ರವಾಗಿರುತ್ತದೋ… ಅದೇ ರೀತಿ ದಂಪತಿಗಳು ಪರಸ್ಪರರ ಗೌರವ ಉಳಿಸುವ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಪತಿಯು ಆರ್ಥಿಕ ಸ್ತಂಭವಾಗಿದ್ದರೆ, ಪತ್ನಿಯು ಮನೆಯ ಜವಾಬ್ದಾರಿಯನ್ನು ಹೊರುವವಳಾಗಿರುತ್ತಾಳೆ. […]









