ಮನೆಯನ್ನು ಸ್ವಚ್ಛಗೊಳಿಸಲು ನಾವು ಅನೇಕ ಬಗೆಯ ಕ್ಲೀನರ್ ಲಿಕ್ವಿಡ್ಗಳನ್ನು ಅಂಗಡಿಯಿಂದ ತಂದು ಬಳಸುತ್ತೇವೆ. ಆದರೆ ಕಡಿಮೆ ಬೆಲೆಯಲ್ಲಿ ಬಗೆ ಬಗೆಯ ಲಿಕ್ವಿಡ್ಗಳನ್ನು ಖುದ್ದಾಗಿ ಮನೆಯಲ್ಲಿಯೇ ತಯಾರಿಸಬಹುದು. ಇಲ್ಲಿದೆ ಅವುಗಳನ್ನು ತಯಾರಿಸುವ ಸುಲಭ ವಿಧಾನ: ಬಹೂಪಯೋಗಿ ಅಂಟುವಾಳ ಕಾಯಿ ನೀರು:ಎರಡು ಲೀಟರ್ ನೀರಿಗೆ 35 ಅಂಟುವಾಳ ಕಾಯಿಯನ್ನು ಹಾಕಿ. ಅರ್ಧ ಪ್ರಮಾಣ ಬರುವವರೆಗೆ, ಅಂದರೆ ಒಂದು ಲೀಟರ್ ಆಗುವವರೆಗೆ ಕುದಿಸಿ ನಂತರ ಅದರ ಬೀಜವನ್ನು ಬಿಸಾಡಿ. ಬೀಜ ತೆಗೆದ ಕಾಯಿಯನ್ನು ಪುನಃ ನೀರಿನಲ್ಲಿ ಹಾಕಿ ಸರಿಯಾಗಿ ಕಿವುಚಿ ತೆಗೆಯಿರಿ. […]










