ಮಂಗಳೂರು: ಅನುಪಮ ಮಹಿಳಾ ಮಾಸಿಕದ ನಿರ್ಗಮಿತ ಸಂಪಾದಕಿ ಶ್ರೀಮತಿ ಶಹನಾಝ್ ಎಂ. ಗೆ ಸನ್ಮಾರ್ಗ ಪಬ್ಲಿಕೇಷನ್ ಟ್ರಸ್ಟ್ ವತಿಯಿಂದ ಸನ್ಮಾನ ಮತ್ತು ಅಭಿನಂದನಾ ಸಭೆಯನ್ನು ಏರ್ಪಡಿಸಲಾಗಿತ್ತು.


ಈ ಸಭೆಯನ್ನುದ್ದೇಶಿಸಿ ಟ್ರಸ್ಟಿನ ಚೇರ್ ಮಾನ್ ಅಷ್ಫಾಕ್ ಅಹ್ಮದ್, ಸನ್ಮಾರ್ಗ ಸಂಪಾದಕ ಏ. ಕೆ. ಕುಕ್ಕಿಲ, ಅನುಪಮ ನೂತನ ಸಂಪಾದಕಿ ಸಬೀಹಾ ಫಾತಿಮಾ, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಹೊಣೆಗಾರರಾದ ಸಈದ್ ಇಸ್ಮಾಯಿಲ್, ಅಬ್ದುಲ್ ಕರೀಮ್ ಉಳ್ಳಾಲ ಮಾತನಾಡಿದರು.

ಬಳಿಕ ಶಹನಾಝ್ ಎಂ. ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅನುಪಮ ಬಳಗವು ಅವರಿಕೆ ನೆನಪಿನ ಕಾಣಿಕೆಯನ್ನು ನೀಡಿತು.

ಬಳಿಕ ಮಾತನಾಡಿದ ಶಹನಾಝ್ ಎಂ. ಅನುಪಮದೊಂದಿಗಿನ ತನ್ನ ಸುದೀರ್ಘ ಪಯಣವನ್ನು ವಿವರಿಸಿ, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಬ್ಲಿಕೇಷನ್ ಟ್ರಸ್ಟಿಯಾಗಿರುವ ಕೆ.ಎಂ. ಅಶ್ರಫ್ ವಹಿಸಿದರು.

ಹಲವಾರು ಅನುಪಮ ಓದುಗರು ನೆರೆದಿದ್ದ ಸಭೆಯು ಲಘು ಉಪಹಾರದೊಂದಿಗೆ ಮುಕ್ತಾಯವಾಯಿತು.



