“ನೀವು ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದೀರಿ” ಎಂಬುದು ಕುಟುಂಬ ಸಮಾಲೋಚನೆ ಅವಧಿಗಳಲ್ಲಿ ನಿಯಮಿತವಾಗಿ ಕೇಳಿಬರುವ ಮಾತು. ಯಾವಾಗಲು ನೀವು ನನ್ನ ಮೇಲೆಯೇ ಆರೋಪ ಹೊರಿಸುತ್ತೀರಿ ಅಂದರೆ ಯಾವಾಗಲೂ ನನ್ನದೇ ತಪ್ಪಾ. ಇದು ಕೂಡ ನಿರಂತರ ಪಲ್ಲವಿ.”
ನೀವು ತುಂಬಾ ಭಾವನಾತ್ಮಕ ವಾಗಿರುವ ಸಂದರ್ಭದಲ್ಲಿ ನಿಮ್ಮ ಸಂಗಾತಿ ತನ್ನ ಶರ್ಟ್ ಅಥವಾ ತನ್ನ ಶಾಂಪೂವಿನ ಬಗ್ಗೆ ಮಾತನಾಡುತ್ತಾರೆಯೇ? ಪಾರ್ಟಿಗಳಲ್ಲಿ ನಿಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುತ್ತಾರೆಯೇ? ಹಾಗಿದ್ದಲ್ಲಿ, ನೀವು ನಾರ್ಸಿಸಿಸ್ಟ್ನೊಂದಿಗೆ ವಾಸಿಸುತ್ತಿದ್ದೀರಿ ಎಂದು ನೀವು ಹೇಳಬಹುದು. ನೀವು ನಾರ್ಸಿಸಿಸ್ಟ್ನೊಂದಿಗೆ ವಾಸಿಸುವಾಗ ನೀವು ಎದುರಿಸಬೇಕಾದ ಮಾನಸಿಕ ಸಮಸ್ಯೆಗಳು ಚಿಕ್ಕದಲ್ಲ. ಅವರು ಯಾವಾಗಲೂ ತಮ್ಮ ಸಂಗಾತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ ಮತ್ತು ವಿವಿಧ ತಂತ್ರಗಳ ಮೂಲಕ ತಮ್ಮ ಸಂಗಾತಿಯನ್ನು ತಮ್ಮ ಗುಲಾಮರನ್ನಾಗಿ ಮಾಡುವ ರೀತಿ ಇವರಲ್ಲಿ ಕಾಣಬಹುದು.
ಅವರು ತಮ್ಮನ್ನು ತಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ತಾವು ಮಾಡುವ ಎಲ್ಲವೂ ಸರಿ ಮತ್ತು ಅವರಲ್ಲಿ ಯಾವುದೇ ದೋಷಗಳು ಅಥವಾ ನ್ಯೂನತೆಗಳಿಲ್ಲ ಎಂದು ನಂಬುತ್ತಾರೆ. ಈ ಮನೋಭಾವವನ್ನು ಅವರ ನಡವಳಿಕೆ ಮತ್ತು ಮಾತಿನಲ್ಲಿ ಕಾಣಬಹುದು. ಅವರು ತಾವು ಶ್ರೇಷ್ಠರು ಎಂಬ ಭಾವನೆಯಲ್ಲಿರುತ್ತಾರೆ. ಅವರ ಸಂಗಾತಿಗಳ ಜೀವನವು ದುಃಖಕರವಾಗಿರುತ್ತದೆ. ಪರಸ್ಪರ ಹಂಚಿಕೊಳ್ಳುವ ವರ್ತನೆ ಅವರಲ್ಲಿ ಇರುವುದಿಲ್ಲ ಅವರು ತಮ್ಮ ಸಂಗಾತಿಯನ್ನು ಎಂದಿಗೂ ಪರಿಗಣಿಸುವುದಿಲ್ಲ.
ನಿಮ್ಮ ಸಂಗಾತಿಯ ಆತ್ಮವಿಶ್ವಾಸವನ್ನು ಕೆಡಿಸುವುದು ಮತ್ತು ಸಂಗಾತಿಯ ಯೋಚನೆಯೇ ತಪ್ಪು ಎಂದು ತೋರಿಸಿ ಕೊಡಲು ಇವರು ಪ್ರಯತ್ನಿಸುತ್ತಾರೆ.
ಅವರೊಂದಿಗೆ ವಾದಿಸಲು ಪ್ರಯತ್ನಿಸುವುದು ಮತ್ತು ತಪ್ಪುಗಳನ್ನು ಎತ್ತಿ ತೋರಿಸುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಅಂತಹ ವ್ಯಕ್ತಿಗಳಿಂದ ಭಾವನಾತ್ಮಕವಾಗಿ ದೂರವಿರುವುದು ನೋವನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ನಾವು ಸಾಮಾನ್ಯವಾಗಿ ಕೆಲವು ಜನರನ್ನು ಸ್ವಾರ್ಥಿಗಳೆಂದು ಮಾತನಾಡುತ್ತೇವೆ, ಆದರೆ ನಾರ್ಸಿಸಿಸ್ಟಿಕ್ ವ್ಯಕ್ತಿತ್ವ ಹೊಂದಿರುವ ಜನರು ಇದಕ್ಕಿಂತ ಸಂಪೂರ್ಣವಾಗಿ ಭಿನ್ನರಾಗಿರುತ್ತಾರೆ. ಸ್ವಾರ್ಥ ಮತ್ತು ಸಹಾನುಭೂತಿಯ ಕೊರತೆಯು ನೈಸರ್ಗಿಕ ಲಕ್ಷಣವಾಗಿ ಮಾರ್ಪಟ್ಟಾಗ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ಸ್ಪಷ್ಟವಾಗಿ ಕಂಡುಬAದಾಗ, ಅದು ನಾರ್ಸಿಸಿಸ್ಟಿಕ್ ವ್ಯಕ್ತಿಯ ಸಂಗಾತಿಗಳಲ್ಲಿ ಆತಂಕ, ಖಿನ್ನತೆ ಮತ್ತು ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸಮರ್ಥತೆಯನ್ನು ಉಂಟುಮಾಡುವ ಸಾಧ್ಯತೆಯಿದೆ.
ಮದುವೆಗೆ ಮುಂಚೆ ಚೆನ್ನಾಗಿದ್ದು ನಂತರ ಪ್ರತಿದಿನ “ನಿನ್ನ ದೇಹವು ಸುಂದರವಾಗಿಲ್ಲ, ಬಣ್ಣವಿಲ್ಲ, ನನಗೆ ಸರಿಹೊಂದುವುದಿಲ್ಲ” ಎಂದು ಹತ್ತು ವರ್ಷಗಳಿಂದ ಹೇಳುತ್ತಾ ಮಾನಸಿಕ ಒತ್ತಡ ಹೇರುತ್ತಿದ್ದ ಒಬ್ಬನ ಹೆಂಡತಿ ಕೌನ್ಸೆಲಿಂಗ್ಗೆ ಬಂದಿದ್ದಳು. ಮಕ್ಕಳ ಬಗ್ಗೆ ಯೋಚಿಸುವುದರಿಂದ ಮಾತ್ರ ತಾನು ತಡೆದುಕೊಳ್ಳುತ್ತಿದ್ದೇನೆ ಎಂದು ಅವಳು ಹೇಳುತ್ತಾಳೆ.
ಭಾರತದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ, 20 ರಿಂದ 30 ವರ್ಷ ವಯಸ್ಸಿನ 100 ಪುರುಷರ ಸಮೀಕ್ಷೆಯನ್ನು ನಡೆಸಿ ನಾಸಿಸ್ಟಿಕ್ ಸ್ವಭಾವ ಮತ್ತು ಹಿಂಸೆಯ ನಡುವೆ ಸಂಬAಧ ಇದೆಯೇ ಎಂದು ಅಧ್ಯಯನ ನಡೆಸಿದಾಗ ನಾಸಿಸ್ಟಿಕ್ ಸ್ವಭಾವವಿರುವ ಜನರಲ್ಲಿ ಶತ್ರುತ್ವ ಮನೋಭಾವ ಮತ್ತು ಮೌಖಿಕ ಮತ್ತು ದೈಹಿಕ ಆಕ್ರಮಣಶೀಲತೆ ಹೆಚ್ಚು ಸಾಮಾನ್ಯವಾಗಿದೆ ಎಂದು ಕಂಡುಬAದಿದೆ.

ಇಸ್ಲಾಮಿಕ್ ದೃಷ್ಟಿಕೋನ
ಇಸ್ಲಾಮಿನಲ್ಲಿ ವಿವಾಹವು ಸ್ಥಿರ ಮತ್ತು ಸಾಮರಸ್ಯದ ಸಮಾಜದ ಮೂಲಾಧಾರವಾಗಿ ಕಾರ್ಯನಿರ್ವಹಿಸುವ ಪವಿತ್ರ ಸಂಬAಧವಾಗಿದೆ. ಇದು ಪರಸ್ಪರ ಗೌರವ, ಘನತೆ ತತ್ವಗಳನ್ನು ಆಧರಿಸಿದೆ. ಕುರ್ ಆನ್, ಹದೀಸ್ ಮತ್ತು ಇಸ್ಲಾಮಿ ಶರೀಯತ್ ಒದಗಿಸಿದ ಮಾರ್ಗಸೂಚಿಗಳು ಇಬ್ಬರೂ ಸಂಗಾತಿಗಳು ಅಲ್ಲಾಹನಿಗೆ ಇಷ್ಟವಾಗುವ ರೀತಿಯಲ್ಲಿ ತಮ್ಮ ಕರ್ತವ್ಯಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸುತ್ತದೆ. ಕುರ್ಆನ್ನಲ್ಲಿ ಸೂಚಿಸಿದಂತೆ, ಗಂಡನು ತನ್ನ ಹೆಂಡತಿಯನ್ನು ದಯೆ ಮತ್ತು ಗೌರವದಿಂದ ನಡೆಸಿಕೊಳ್ಳಬೇಕು:
“ನೀವು ಅವರೊಂದಿಗೆ ಉತ್ತಮ ರೀತಿಯಿಂದ ಜೀವನ ನಡೆಸಿರಿ. ಅವರು ನಿಮಗೆ ಅಪ್ರಿಯರಾಗಿದ್ದರೆ ಒಂದು ವಸ್ತುವು ನಿಮಗೆ ಅಪ್ರಿಯವಾಗಿದ್ದರೂ ಅಲ್ಲಾಹನು ಅದರಲ್ಲೇ ಅತಿ ಹೆಚ್ಚು ಒಳಿತನ್ನಿರಿಸಿರಲೂಬಹುದು.” (4:19). ಪ್ರವಾದಿ ಮುಹಮ್ಮದ್(ಸ) ತಮ್ಮ ವಿದಾಯ ಧರ್ಮೋಪದೇಶದಲ್ಲಿಯೂ ಇದನ್ನು ಒತ್ತಿ ಹೇಳಿದರು.
“ಮಹಿಳೆಯರ ವಿಷಯದಲ್ಲಿ ಅಲ್ಲಾಹನಿಗೆ ಭಯಪಡಿರಿ! ನಿಜಕ್ಕೂ, ನೀವು ಅವರನ್ನು ಅಲ್ಲಾಹನ ರಕ್ಷಣೆಯಲ್ಲಿ ತೆಗೆದುಕೊಂಡಿದ್ದೀರಿ. ಅಲ್ಲಾಹನ ಮಾತಿನ ಪ್ರಕಾರ ಅವರೊಂದಿಗೆ ಲೈಂಗಿಕ ಸಂಬಂಧವು ನಿಮಗೆ ಕಾನೂನುಬದ್ಧವಾಗಿದೆ. ನಿಮ್ಮ ಹೆಂಡತಿಯರ ಮೇಲೆ ನಿಮಗೆ ಹಕ್ಕುಗಳಿವೆ ಮತ್ತು ಅವರಿಗೂ ನಿಮ್ಮ ಮೇಲೆ ಹಕ್ಕುಗಳಿವೆ. ಗಂಡ ಮತ್ತು ಹೆಂಡತಿ ಇಬ್ಬರೂ ಪರಸ್ಪರ ಭಾವನಾತ್ಮಕ ಮತ್ತು ದೈಹಿಕ ಬೆಂಬಲವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಪ್ರವಾದಿ(ಸ) ಹೇಳಿದ್ದಾರೆ: ನಿಮ್ಮಲ್ಲಿ ತನ್ನ ಪತ್ನಿಯೊಂದಿಗೆ ಅತ್ಯುತ್ತಮವಾಗಿ ವರ್ತಿಸುವವನೇ ನಿಮ್ಮಲ್ಲಿ ಉತ್ತಮರು.
ವ್ಯಕ್ತಿತ್ವ ಅಸ್ವಸ್ಥತೆಗಳಿಗೆ ಆನುವಂಶಿಕ ಅಂಶಗಳು ಕಾರಣವಾಗಿದ್ದರೂ, ಜೀವನದ ಸಂದರ್ಭಗಳು ಮತ್ತು ಅನುಭವಗಳು ಸಹ ಜನರನ್ನು ಅವುಗಳ ಕಡೆಗೆ ಕರೆದೊಯ್ಯುತ್ತವೆ. ಎರಡು ಮತ್ತು ನಾಲ್ಕು ವರ್ಷದೊಳಗೆ ಸಹಾನುಭೂತಿ ಅಥವಾ ಕರುಣೆಯನ್ನು ತೋರಿಸದ ಮಕ್ಕಳನ್ನು ಗುರುತಿಸಲು ಪೋಷಕರು ಸಿದ್ಧರಾಗಿರಬೇಕು ಮತ್ತು ಭವಿಷ್ಯದ ಪೀಳಿಗೆಗೆ ನೈತಿಕತೆಯ ಪ್ರಜ್ಞೆಯನ್ನು ಬೆಳೆಸಲು ವೃತ್ತಿಪರರಿಂದ ಸಮಯೋಚಿತ ಸಹಾಯವನ್ನು ನೀಡಬೇಕು.

ಗುರುತಿಸುವುದು ಹೇಗೆ?
1. ಸಹಾನುಭೂತಿಯ ಕೊರತೆ – ಸಂಗಾತಿಯ ಭಾವನೆಗಳು, ಅಗತ್ಯಗಳು ಮತ್ತು ಆಸೆಗಳನ್ನು ಗುರುತಿಸಲು ಅಥವಾ ಸಮರ್ಪಕವಾಗಿ ಪರಿಗಣಿಸಲು ಪ್ರಯತ್ನಿಸದಿರುವುದು.
2. ಅವರು ತಮ್ಮದೇ ಆದ ಸಾಧನೆಗಳು ಮತ್ತು ಸಾಮರ್ಥ್ಯಗಳನ್ನು ಉತ್ಪ್ರೇಕ್ಷಿಸುತ್ತಾರೆ ಮತ್ತು ತಮ್ಮ ಸಂಗಾತಿಯ ಸಾಮರ್ಥ್ಯಗಳನ್ನು ಕಡಿಮೆ ಅಂದಾಜು ಮಾಡುತ್ತಾರೆ.
3. ನಾರ್ಸಿಸಿಸ್ಟ್ಗರು ಸಾಮಾನ್ಯವಾಗಿ ಕಡಿಮೆ ಸ್ವಾಭಿಮಾನವನ್ನು ಹೊಂದಿರುತ್ತಾರೆ. ಪರಿಣಾಮವಾಗಿ, ಅವರು ನಿರಂತರ ಹೊಗಳಿಕೆ, ಗಮನ ಮತ್ತು ವಿಶೇಷ ಪರಿಗಣನೆಯನ್ನು ಬಯಸುತ್ತಾರೆ. ಅವರಿಗೆ ಇದು ಸಿಗದಿದ್ದಾಗ, ಅವರು ಕೋಪಗೊಳ್ಳಬಹುದು ಅಥವಾ ಅಸಹನೆ ಹೊಂದಬಹುದು.
4. ರಾಜಿ ಮಾಡಿಕೊಳ್ಳದೆ ಎಲ್ಲಾ ಅಗತ್ಯಗಳನ್ನು ಪೂರೈಸಬೇಕು ಎಂಬ ಹಠ.
5. ಅವರು ಸನ್ನಿವೇಶಗಳು ಮತ್ತು ಜನರನ್ನು ನಿಯಂತ್ರಿಸುತ್ತಾರೆ ಮತ್ತು ತಮ್ಮ ಸ್ವಂತ ಲಾಭಕ್ಕಾಗಿ ಅವರನ್ನು ಭಾವನಾತ್ಮಕವಾಗಿ ಅಪರಾಧಿ ಅಥವಾ ಪಶ್ಚಾತ್ತಾಪಭಾವವಿಲ್ಲದೆ. ಬ್ಲ್ಯಾಕ್ಮೇಲ್ ಮಾಡುತ್ತಾರೆ,
6 ಸೌಮ್ಯ ಮತ್ತು ಸಕಾಲಿಕ ಟೀಕೆಗಳು ಸಹ ಅವರನ್ನು ಕೋಪಗೊಳ್ಳುವಂತೆ ಮಾಡುತ್ತವೆ ಮತ್ತು ಇತರರ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತವೆ. ಅವರು ತಮ್ಮ ಕ್ರಿಯೆಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅವರು ತಮ್ಮ ಕ್ರಿಯೆಗಳಿಗೆ ಇತರರನ್ನು ದೂಷಿಸುತ್ತಾರೆ.
7. ಅತಿಯಾದ ನಿಯಂತ್ರಣ – ಅವರು ತಮ್ಮ ಸಂಗಾತಿಯ ವೈಯಕ್ತಿಕ, ಆರ್ಥಿಕ ನಿರ್ಧಾರಗಳು ಮತ್ತು ಸಾಮಾಜಿಕ ಜೀವನದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಾರೆ. ಅವರು ಆಗಾಗ್ಗೆ ತಮ್ಮ ಸಂಗಾತಿಯ ಸ್ನೇಹಿತರು ಮತ್ತು ಕುಟುಂಬವನ್ನು ಟೀಕಿಸುತ್ತಾರೆ, ಅವರನ್ನು ಪ್ರತ್ಯೇಕಿಸಲು ಮತ್ತು ತನ್ನ ಮೇಲೆ ಹೆಚ್ಚು ಅವಲಂಬಿತರಾಗುವAತೆ ಮಾಡಲು ಪ್ರಯತ್ನಿಸುತ್ತಾರೆ.
8. ಅವರು ಸಾರ್ವಜನಿಕವಾಗಿ ತುಂಬಾ ಆತ್ಮವಿಶ್ವಾಸ ಮತ್ತು ಆಕರ್ಷಕವಾಗಿ ಕಾಣಿಸಬಹುದು, ಆದರೆ ಖಾಸಗಿಯಾಗಿ, ಅವರು ನಿಮ್ಮನ್ನು ಅತಿಯಾಗಿ ಟೀಕಿಸಲು, ತಿರಸ್ಕರಿಸಲು ಅಥವಾ ನಿಮ್ಮನ್ನು ಕೆಟ್ಟದಾಗಿ ಕಾಣುವಂತೆ ಮಾಡಲು ಹಿಂಜರಿಯುವುದಿಲ್ಲ.



