ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ಬಳಕೆದಾರರಿಗೆ AI (ಕೃತಕ ಬುದ್ಧಿಮತ್ತೆ) ಚಾಟ್ಬಾಟ್ಗಳು ಅತ್ಯಂತ ಆಪ್ತ ಗೆಳೆಯನಂತಾಗಿವೆ. ಕೆಲಸದ ಒತ್ತಡವಿರಲಿ ಅಥವಾ ಓದಿನ ಗೊಂದಲವಿರಲಿ, ನಾವು ತಕ್ಷಣ ಮೊರೆ ಹೋಗುವುದು ಈ ಚಾಟ್ಬಾಟ್ಗಳಿಗೇ. ಆದರೆ, ನಮಗೆ ಅರಿವಿಲ್ಲದಂತೆ ನಾವು ಇವುಗಳ ಮೇಲೆ ಅತಿಯಾಗಿ ಅವಲಂಬಿತರಾಗುತ್ತಿದ್ದೇವೆ.
ಇತ್ತೀಚಿನ ವರದಿಗಳ ಪ್ರಕಾರ, ಚಾಟ್ಬಾಟ್ಗಳೊಂದಿಗೆ ಅತಿಯಾದ ಮಾಹಿತಿ ಹಂಚಿಕೊಳ್ಳುವುದು ನಿಮ್ಮ ಖಾಸಗಿ ಜೀವನಕ್ಕೆ ಸಂಚಕಾರ ತರಬಹುದು. ಹಾಗಾದರೆ, ಸುರಕ್ಷತೆಯ ದೃಷ್ಟಿಯಿಂದ ನೀವು ಯಾವ ವಿಷಯಗಳನ್ನು ಗೌಪ್ಯವಾಗಿಡಬೇಕು? ಇಲ್ಲಿದೆ ಮಾಹಿತಿ.
1. ಪಾಸ್ವರ್ಡ್ ಮತ್ತು ವೈಯಕ್ತಿಕ ಮಾಹಿತಿ
ಚಾಟ್ಬಾಟ್ಗಳನ್ನು ಎಂದಿಗೂ ನಿಮ್ಮ ಪಾಸ್ವರ್ಡ್ ಅಥವಾ ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸುವ ಡೈರಿ ಎಂದು ಭಾವಿಸಬೇಡಿ. ನೀವು ರಸ್ತೆಯಲ್ಲಿ ನಿಂತು ಜೋರಾಗಿ ಕೂಗಲು ಇಷ್ಟಪಡದ ವೈಯಕ್ತಿಕ ಮಾಹಿತಿಯನ್ನು ಚಾಟ್ಬಾಟ್ನಲ್ಲಿ ಟೈಪ್ ಕೂಡ ಮಾಡಬೇಡಿ.
2. ಬ್ಯಾಂಕಿಂಗ್ ಮತ್ತು ಹಣಕಾಸು ವಿವರಗಳು
ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್ ವಿವರ ಅಥವಾ ಪಿನ್ (PIN) ಸಂಖ್ಯೆಗಳನ್ನು ಹಂಚಿಕೊಳ್ಳಬೇಡಿ. ಇದು ನಿಮ್ಮ ಜೀವಮಾನದ ಉಳಿತಾಯವನ್ನು ಅಪಾಯಕ್ಕೆ ದೂಡಬಹುದು.
3. ನಿಮ್ಮ ಆಳದ ರಹಸ್ಯಗಳು
ನಮ್ಮ ಮನಸ್ಸಿನ ರಹಸ್ಯಗಳನ್ನು ಯಾರೊಂದಿಗಾದರೂ ಹೇಳಿಕೊಂಡರೆ ಹಗುರಾಗುತ್ತದೆ ಎಂಬ ಭಾವನೆ ಇರುತ್ತದೆ. ಆದರೆ ಚಾಟ್ಬಾಟ್ ಮನುಷ್ಯನಲ್ಲ! ಅದಕ್ಕೆ ಭಾವನೆಗಳಿಲ್ಲ ಮತ್ತು ನಿಮ್ಮ ರಹಸ್ಯಗಳನ್ನು ಅದು ಸುರಕ್ಷಿತವಾಗಿರಿಸುತ್ತದೆ ಎಂಬ ಭರವಸೆಯೂ ಇಲ್ಲ.
4. ತುರ್ತು ಸಂದರ್ಭದ ನಿರ್ಧಾರಗಳು
ವಾಹನದ ಬ್ರೇಕ್ ಫೇಲ್ ಆದಾಗ ಅಥವಾ ಜೀವಕ್ಕೆ ಅಪಾಯವಿರುವ ತುರ್ತು ಪರಿಸ್ಥಿತಿಯಲ್ಲಿ ಚಾಟ್ಬಾಟ್ ಸಲಹೆಗಾಗಿ ಕಾಯಬೇಡಿ. ಅಂತಹ ಸಮಯದಲ್ಲಿ ನಿಮ್ಮ ಸ್ವಂತ ವಿವೇಚನೆ ಮತ್ತು ಸ್ಥಳೀಯ ಸಹಾಯವನ್ನು ಪಡೆಯುವುದು ಮುಖ್ಯ.
5. ಬ್ರೇಕಿಂಗ್ ನ್ಯೂಸ್ ಮತ್ತು ಪ್ರಚಲಿತ ವಿದ್ಯಮಾನ
AI ಚಾಟ್ಬಾಟ್ಗಳು ಪ್ರತಿ ಸೆಕೆಂಡಿನ ಸುದ್ದಿಯನ್ನು ಅಪ್ಡೇಟ್ ಮಾಡುವಂತೆ ನಿರ್ಮಿತವಾಗಿರುವುದಿಲ್ಲ. ಸ್ಟಾಕ್ ಮಾರುಕಟ್ಟೆ, ಪಂದ್ಯಗಳ ಸ್ಕೋರ್ ಅಥವಾ ಇತ್ತೀಚಿನ ಸುದ್ದಿಗಳಿಗಾಗಿ ಇವುಗಳನ್ನು ಅವಲಂಬಿಸುವ ಬದಲು ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳನ್ನು ಗಮನಿಸಿ.
6. ಆರೋಗ್ಯದ ಸಮಸ್ಯೆಗಳು
ಚಾಟ್ಬಾಟ್ ನಿಮಗೆ ಆರೋಗ್ಯದ ಬಗ್ಗೆ ಸಾಮಾನ್ಯ ಮಾಹಿತಿ ನೀಡಬಹುದು, ಆದರೆ ಅದು ವೈದ್ಯರಲ್ಲ. ಮಾನಸಿಕ ಅಥವಾ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಅರ್ಹ ವೈದ್ಯರನ್ನೇ ಭೇಟಿ ಮಾಡಿ. ತಪ್ಪು ಮಾಹಿತಿ ನೀಡುವ ಚಿಕಿತ್ಸೆಗಳು ಅಪಾಯಕಾರಿಯಾಗಬಲ್ಲವು.
7. ಭಾವನಾತ್ಮಕ ಸಂಬಂಧಗಳು
ಚಾಟ್ಬಾಟ್ ಕೇವಲ ಸಾಫ್ಟ್ವೇರ್ ಪ್ರೋಗ್ರಾಂ ಆಗಿದೆ. ಅದಕ್ಕೆ ಮಾನವ ಸಂಬಂಧಗಳ ಸಂಕೀರ್ಣತೆ ಅರ್ಥವಾಗುವುದಿಲ್ಲ. ಭಾವನಾತ್ಮಕ ಬೆಂಬಲಕ್ಕಾಗಿ ಅಥವಾ ಸಂಬಂಧಗಳ ನಿರ್ಧಾರಕ್ಕಾಗಿ ಮನುಷ್ಯರನ್ನೇ ಅವಲಂಬಿಸಿ.
8. ಲೋಕಕ್ಕೆ ತಿಳಿಯಬಾರದು ಎನ್ನುವ ವಿಷಯಗಳು
”ಜಗತ್ತಿನಲ್ಲಿ ಯಾರಿಗೂ ತಿಳಿಯಬಾರದು” ಎಂದು ನೀವು ಬಯಸುವ ಯಾವುದೇ ವಿಷಯವಿದ್ದರೂ ಅದನ್ನು ಚಾಟ್ಬಾಟ್ ಬಳಿ ಹಂಚಿಕೊಳ್ಳಬೇಡಿ. ಚಾಟ್ಬಾಟ್ನಲ್ಲಿ ನೀವು ಹಂಚಿಕೊಳ್ಳುವ ಮಾಹಿತಿ ಸೈಬರ್ ಲೋಕದ ಭಾಗವಾಗಿ ಉಳಿದುಬಿಡುತ್ತದೆ ಎಂಬುದನ್ನು ನೆನಪಿಡಿ



